ಉಗಿಸಾಂದ್ರಕರಿ
	
ಉಗಿಯನ್ನು ನೀರಾಗಿ ಸಾಂದ್ರೀಕರಿಸುವ ಉಷ್ಣ ವರ್ಗಾವಣೆ ಉಪಕರಣ (ಸ್ಟೀಂ ಕಂಡೆನ್ಸರ್). ಇದು ಉಗಿಯಲ್ಲಿರುವ ಗುಪ್ತೋಷ್ಣವನ್ನು (ಲೇಟೆಂಟ್ ಹೀಟ್) ತೆಗೆದು ನೀರಿನಂಥ ಒಂದು ದ್ರವ ಅದನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಉಗಿಸಾಂದ್ರಕದಲ್ಲಿ ಎರಡು ವರ್ಗಗಳಿವೆ--ಸ್ಪರ್ಶ (ಕಾಂಟ್ಯಾಕ್ಟ್) ಮತ್ತು ಮೇಲ್ಮೈ (ಸರ್ಫೇಸ್). ಮೊದಲಿನದರಲ್ಲಿ ಉಗಿಯೂ ತಣಿಸುವ ನೀರೂ ಒಂದು ಸಂಪುಟದಲ್ಲಿ ಮಿಶ್ರವಾಗಿ ಉಗಿ ಸಾಂದ್ರೀಕರಿಸುತ್ತದೆ. ಎರಡನೆಯದರಲ್ಲಿ ಉಗಿ ಮತ್ತು ತಣಿಸುವ ನೀರು ಇವನ್ನು ಪ್ರತ್ಯೇಕಿಸುವ ಒಂದು ಲೋಹದ ತೆರೆ ಇದೆ; ತೆರೆಯೇ ಸಾಂದ್ರಕದ ಮೇಲ್ಮೈ ಇವೆರಡು ವರ್ಗದ ಸಾಂದ್ರಕಗಳೂ ಯಂತ್ರೋದ್ಯಮದ ಸೌಕರ್ಯವನ್ನು ಅವಲಂಬಿಸಿ ಬಳಕೆಯಲ್ಲಿವೆ. ಒಂದೇ ಕವಚದೊಳಗಿನ ಒಂದು ದೊಡ್ಡ ಸಾಂದ್ರಕದಲ್ಲಿ ಉಗಿ ಘ. ಅಡಿಗಳಷ್ಟು ಪ್ರದೇಶವನ್ನು ವ್ಯಾಪಿಸಲು ಅವಕಾಶವಿದೆ. ಇನ್ನಷ್ಟು ಅವಕಾಶ ಬೇಕೆಂದೆನ್ನಿಸಿದಾಗ ಅದನ್ನು ರಚಿಸಿಕೊಳ್ಳಬಹುದು. ಆದರೆ ಆಗ ಕವಚವನ್ನು ಸಮದ್ವಿಭಾಗಿಸುತ್ತಾರೆ. 1 ಪೌಂಡ್ ಉಗಿಯನ್ನು ಸಾಂದ್ರೀಕರಿಸಲು ಬೇಕಾಗುವ ತಣ್ಣೀರು ಸುಮಾರು ಒಂದು ಪೌಂಡು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ